Home > PROGRAM > 2022ರ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಗಳ ಫಲಿತಾಂಶ

ಪ್ರೌಶಶಾಲಾ ವಿದ್ಯಾರ್ಥಿಗಳಿಗಾಗಿ
ರಾಜ್ಯ ಮಟ್ಟದ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಗಳು – 2022 ರ ಫಲಿತಾಂಶ

ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಾ, ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರಿನ ಜನದನಿ ಸಂಸ್ಥೆಯು, ದಿನಾಂಕ 17 ಡಿಸೆಂಬರ್ 2022ರಂದು, ಬೆಳಿಗ್ಗೆ 10.30ರಿಂದ ಅಪರಾಹ್ನ 12.00ವರೆಗೆ ರಾಜ್ಯದ, ಸರಕಾರ ಮತ್ತು ಸರಕಾರೇತರ ಪ್ರೌಢಶಾಲಾ ಮಕ್ಕಳಿಗಾಗಿ ಪ್ರಬಂಧ ಮತ್ತು ಚಿತ್ರಕಲೆಯ ಸ್ಪರ್ಧೆಗಳನ್ನು ಆನ್ಲೈನ್ ಮೂಲಕ ನಡೆಸಿತ್ತು. ಈ ಮೂಲಕ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳಗಳನ್ನು ತಡೆಗಟ್ಟುವ ಕುರಿತು ಯುವಜನತೆಯಲ್ಲಿ ಆರೋಗ್ಯಕರ ಚಿಂತನೆ ಮತ್ತು ಜವಾಬ್ದಾರಿಯನ್ನು ಹುಟ್ಟಿಸುವ ಉದ್ದೇಶ ಜನದನಿಯದು. 

ವಿಜಯಪುರ, ತುಮಕೂರು, ಧಾರವಾಡ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮೈಸೂರು, ಹಾವೇರಿ, ಚಿತ್ರದುರ್ಗ, ಮೈಸೂರು, ದಾವಣಗೆರೆ, ಶಿವಮೊಗ್ಗ, ಗದಗ,  ಬೆಂಗಳೂರು, ರಾಯಚೂರು, ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ಸುಮಾರು 20 ಜಿಲ್ಲೆಗಳ, ಒಟ್ಟು 100 ಪ್ರೌಢಶಾಲೆಗಳಿಂದ ಚಿತ್ರಕಲಾ ಸ್ಪರ್ಧೆಯಲ್ಲಿ 153, ಪ್ರಬಂಧ ಸ್ಪರ್ಧೆಯಲ್ಲಿ 185 ಮಕ್ಕಳು ಈ ಸ್ಪರ್ಧೆಗಳಲ್ಲಿ ಗೂಗಲ್ ಮೀಟ್ ಆನ್ಲೈನ್ ಮೂಲಕ ಭಾಗವಹಿಸಿದ್ದರು.  

ನಾಂಕ ೧೭ ಡಿಸೆಂಬರ್ ೨೦೨೨ರಂದು ನಡೆದ ಈ ಸ್ಪರ್ಧೆಗಳನ್ನು ಗೂಗಲ್ ಮೀಟ್ ಮೂಲಕ, ಜನದನಿಯ ಸದಸ್ಯರಾದ ಜಯಲಕ್ಷ್ಮಿ ಪಾಟೀಲ್, ರೂಪ ಸತೀಶ್, ವಿದ್ಯಾಶಂಕರ್ ಹರಪನಹಳ್ಳಿ, ರಾಘವೇಂದ್ರ ಶರ್ಮ, ಜಯಶ್ರೀ ಮಾಚಿಗಣಿ, ರಶ್ಮಿ ಪೈ, ಮಧುಸೂದನ ವೈ ಎನ್, ಸುರಕ್ಷ್ ದಾಸ್, ಅಮೋಲ್ ಪಾಟೀಲ್, ಸ್ನೇಹಾ ಪಾಟೀಲ್ ಮತ್ತು ನಿಹಾರಿಕ ಪಾಟೀಲ್ ಅವರುಗಳು ನಿರ್ವಹಿಸಿದರು.

ಪ್ರಬಂಧ ಸ್ಪರ್ಧೆ

ವಿಷಯ:
ಲೈಂಗಿಕ ಶೋಷಣೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮಾಜದ ಜವಾಬ್ದಾರಿಗಳೇನು? ಮತ್ತು ಸರ್ಕಾರಕ್ಕೆ ನೀವು ನೀಡುವ ಸಲಹೆ ಸೂಚನೆಗಳು ಏನು? 

ವಿಜೇತರು

ಪ್ರಥಮ ಬಹುಮಾನ: 5000/-
ಕುಮಾರಿ. ಫಾತಿಮಾ ಅಂಜುಮ್ ಆರ್ – ೯ನೇ ತರಗತಿ, ಸರಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆ, ಗೌರಿಪಾಳ್ಯ, ಬೆಂಗಳೂರು

ದ್ವಿತೀಯ ಬಹುಮಾನ: ₹3000/-
ಕುಮಾರಿ. ವಿದ್ಯಶ್ರೀ ಗಣಪತಿ ಸೂರ್ಯವಂಶಿ, ೧೦ನೇ ತರಗತಿ, ಸರಕಾರಿ ಪ್ರೌಢಶಾಲೆ, ಟಕ್ಕಳಕಿ, ವಿಜಯಪುರ ಜಿಲ್ಲೆ

ತೃತೀಯ ಬಹುಮಾನ: ₹2000/-
ಕುಮಾರಿ. ತ್ರಿಶಾ ಎ ಎಂ, ೧೦ನೇ ತರಗತಿ, ಸರಕಾರಿ ಪ್ರೌಢಶಾಲೆ, ಅಂಗರೇಖನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ

ಮೆಚ್ಚುಗೆ: ತಲಾ1000/-
೧) ಕುಮಾರಿ. ನಾಗಮ್ಮ ಅಗಸರ್, ಕೊಕಟನೂರು, ವಿಜಯಪುರ ಜಿಲ್ಲೆ
೨) ಕುಮಾರಿ. ರಕ್ಷಿತಾ ಎಂ ಹುಡುಕುಳ, ಕೋಲಾರ ಜಿಲ್ಲೆ
೩) ಕುಮಾರಿ. ಕುಸುಮಾ ಆರ್, ತುಮಕೂರು 

ಚಿತ್ರಕಲಾ ಸ್ಪರ್ಧೆ

ವಿಷಯ
ಲೈಂಗಿಕ ಶೋಷಣೆಗಳಿಂದ ಪಾರಾಗಲು ನಿಮ್ಮ ಉಪಾಯಗಳು ಏನು? ನಿಮ್ಮ ಪ್ರಕಾರ  ಪರಿಹಾರಗಳು ಏನು?

ವಿಜೇತರು

ಪ್ರಥಮ ಬಹುಮಾನ:5000/-
ಕುಮಾರಿ. ವರ್ಷಿಣಿ ಎ ಎಂ, ೯ನೇ ತರಗತಿ, ಸರಕಾರಿ ಪ್ರೌಢಶಾಲೆ, ಅಂಗರೇಖನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ

ದ್ವಿತೀಯ ಬಹುಮಾನ: 3000/-
ಕುಮಾರಿ. ಪೂರ್ವಿ ದಯಾನಂದ ಶೇಟ್, ೯ನೇ ತರಗತಿ, ಶ್ರೀ. ಮಾರಿಕಾಂಬ ಸರಕಾರಿ ಪ್ರೌಢಶಾಲೆ, ಶಿರಸಿ, ಉತ್ತರ ಕನ್ನಡ ಜಿಲ್ಲೆ

ತೃತೀಯ ಬಹುಮಾನ: ₹2000/-
ಕುಮಾರಿ. ಶ್ರೀ ರಕ್ಷಾ ಎ ಎಚ್, ೮ನೇ ತರಗತಿ, ಸೇಂಟ್ ಮೇರೀಸ್ ಕಾನ್ವೆಂಟ್ ಹೈಸ್ಕೂಲ್, ಯಂತ್ರಾಪುರ, ದಾವಣಗೆರೆ ಜಿಲ್ಲೆ

ಮೆಚ್ಚುಗೆ: ತಲಾ 1000/-
೧) ಕುಮಾರಿ. ಸ್ವಾತಿ ವಿ ಪಾಟೀಲ್, ಅಣ್ಣಿಗೇರಿ, ಧಾರವಾಡ ಜಿಲ್ಲೆ
೨) ಕುಮಾರ. ಕರಣ್ ಸಾವು ರಾಠೋಡ್, ಟಕ್ಕಳಕಿ, ವಿಜಯಪುರ ಜಿಲ್ಲೆ
೩) ಕುಮಾರಿ. ನಿಸರ್ಗ ಎಸ್ ಬಿ, ಯಂತ್ರಾಪುರ ದಾವಣಗೆರೆ ಜಿಲ್ಲೆ

ಪ್ರಬಂಧ ಸ್ಪರ್ಧೆಗೆ ಅನೇಕ ಸಮಾಜಪರ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ, ಜನದನಿಯ, ಶ್ರೀಮತಿ. ರೂಪಾ ಸತೀಶ್, ಶ್ರೀ. ವಿದ್ಯಾಶಂಕರ ಹರಪನಹಳ್ಳಿ ಮತ್ತು ಶ್ರೀಮತಿ. ಜಯಶ್ರೀ ಮಾಚಿಗಣಿ ಅವರು ತೀರ್ಪುಗಾರರಾಗಿದ್ದರು.

ಚಿತ್ರಕಲಾ ಸ್ಪರ್ಧೆಗೆ ನಾಡಿನ ಖ್ಯಾತ ವ್ಯಂಗ್ಯಚಿತ್ರ ಕಲಾವಿದರಾದ ಶ್ರೀ. ರಘುಪತಿ ಶೃಂಗೇರಿ ಅವರು ತೀರ್ಪುಗಾರರಾಗಿದ್ದರು.