ಆರು ಜನ ಟ್ರಸ್ಟಿಗಳನ್ನು ಹೊಂದಿರುವ ಜನದನಿಯಲ್ಲಿ, ಸದ್ಯ ಎಪ್ಪತ್ತಕ್ಕೂ ಹೆಚ್ಚು ಜನ ಸದಸ್ಯರಿದ್ದಾರೆ.
ನೀವೂ ಜನದನಿಯೊಂದಿಗೆ ದನಿಗೂಡಿಸಬಹುದು.
ಅದಕ್ಕಾಗಿ ಜನದನಿಯ ಸದಸ್ಯರಾಗಿ ಹಾಗೂ ಬೆಂಬಲಿಸಿ.
ಸಮಾಜಪರ ಕಾಳಜಿಯುಳ್ಳ ಯಾರು ಬೇಕಾದರೂ ಜನದನಿಯ ಸದಸ್ಯರಾಗಬಹುದು.
ಇದಕ್ಕಾಗಿ ಯಾವುದೇ ಶುಲ್ಕವಿರುವುದಿಲ್ಲ.
ಹೊಸದಾಗಿ ಸೇರುವ ಸದಸ್ಯರಿಗಾಗಿ ಆರು ತಿಂಗಳಿಗೊಮ್ಮೆ ಕಾರ್ಯಾಗಾರವೊಂದನ್ನು ಏರ್ಪಡಿಸಲಾಗುವುದು. ಆ ಕಾರ್ಯಾಗಾರದಲ್ಲಿ ಭಾಗವಹಿಸಿ, ಅನುಭವ ಪಡೆದುಕೊಳ್ಳಬೇಕಾದುದು ಮಾತ್ರ ಜನದನಿಯ ಸದಸ್ಯರಿಗೆ ಕಡ್ಡಾಯವಾಗಿದೆ.
ದಯವಿಟ್ಟು ನಿಮ್ಮ ಅಪಾರ್ಟ್‍ಮೆಂಟ್, ಓಣಿ, ಆಫೀಸ್, ನೀವು ಸಕ್ರಿಯರಾಗಿರುವ ಸಂಘ ಸಂಸ್ಥೆಗಳು, ನಿಮ್ಮ ಮನೆಯ ಹತ್ತಿರದಲ್ಲಿರುವ ಶಾಲೆ ಕಾಲೇಜುಗಳಲ್ಲಿ, ಜನದನಿಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಜನದನಿಯನ್ನು ಬೆಂಬಲಿಸಿ.
ಎಲ್ಲರ ಮನೆಯ ಮಕ್ಕಳು ಸುರಕ್ಷಿತವಾಗಿರಬೇಕೆನ್ನುವುದೊಂದೇ ನಮ್ಮ ಉದ್ದೇಶ ಮತ್ತು ಆಶಯ.
ಚೆಕ್ ಮೂಲಕ ಅಥವಾ ನೇರವಾಗಿ ಜನದನಿಯ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುವುದರ ಮೂಲಕ ತಾವು ಜನದನಿಗೆ ದೇಣಿಗೆ ನೀಡಿ ಸಹಕರಿಸಬಹುದು.
ಖಾತಾದಾರರ ಹೆಸರು: ಜನದನಿ
ಚಾಲ್ತಿ ಖಾತೆ ಸಂಖ್ಯೆ: 35750196431
ಬ್ಯಾಂಕ್: ಭಾರತೀಯ ಸ್ಟೇಟ್ ಬ್ಯಾಂಕ್, ಕೋಣನಕುಂಟೆ ಶಾಖೆ, ಬೆಂಗಳೂರು.
ಐಎಫ್ ಎಸ್ ಸಿ ಕೋಡ್: SBIN0011284