BEL ಶಿಕ್ಷಣ ಸಂಸ್ಥೆಯ 1ನೇ ವರ್ಷದ ಪಿಯೂ ವಿದ್ಯಾರ್ಥಿಗಳಿಗಾಗಿ ಲೈಂಗಿಕ ಶೋಷಣೆ ಕುರಿತ ಜಾಗೃತಿ ಕಾರ್ಯಾಗಾರ
ಮೊನ್ನೆ ಅಂದರೆ 17 Sept 2022, ಶನಿವಾರ ಬೆಳಿಗ್ಗೆ 9.00ರಿಂದ 12.00ರವರೆಗೆ ಬೆಂಗಳೂರಿನ BEL ಶಿಕ್ಷಣ ಸಂಸ್ಥೆಯ ಪಿಯೂ 1ನೇ ವರ್ಷದಲ್ಲಿ ಓದುತ್ತಿರುವ 385 ವಿದ್ಯಾರ್ಥಿಗಳಿಗಾಗಿ ಲೈಂಗಿಕ ಶೋಷಣೆ ಕುರಿತ ಜಾಗೃತಿ ಕಾರ್ಯಾಗಾರವನ್ನು ನಡೆಸಲಾಯಿತು. ಜನದನಿಯ ಜಯಲಕ್ಷ್ಮಿ ಪಾಟೀಲ್, ರೂಪಾ ಸತೀಶ್ ಮತ್ತು ರಾಘವ್ ಶರ್ಮಾ ಅವರುಗಳು ಕಾರ್ಯಾಗಾರವನ್ನು ನಡೆಸಿಕೊಟ್ಟರು. ಪಿಯೂ ಕಾಲೇಜಿನ ಪ್ರಾಂಶುಪಾಲರಾದ...