Home > Awareness sessions for Students > BEL ಶಿಕ್ಷಣ ಸಂಸ್ಥೆಯ 1ನೇ ವರ್ಷದ ಪಿಯೂ ವಿದ್ಯಾರ್ಥಿಗಳಿಗಾಗಿ ಲೈಂಗಿಕ ಶೋಷಣೆ ಕುರಿತ ಜಾಗೃತಿ ಕಾರ್ಯಾಗಾರ

ಮೊನ್ನೆ ಅಂದರೆ 17 Sept 2022, ಶನಿವಾರ ಬೆಳಿಗ್ಗೆ 9.00ರಿಂದ 12.00ರವರೆಗೆ ಬೆಂಗಳೂರಿನ BEL ಶಿಕ್ಷಣ ಸಂಸ್ಥೆಯ ಪಿಯೂ 1ನೇ ವರ್ಷದಲ್ಲಿ ಓದುತ್ತಿರುವ 385 ವಿದ್ಯಾರ್ಥಿಗಳಿಗಾಗಿ ಲೈಂಗಿಕ ಶೋಷಣೆ ಕುರಿತ ಜಾಗೃತಿ ಕಾರ್ಯಾಗಾರವನ್ನು ನಡೆಸಲಾಯಿತು.

ಜನದನಿಯ ಜಯಲಕ್ಷ್ಮಿ ಪಾಟೀಲ್, ರೂಪಾ ಸತೀಶ್ ಮತ್ತು ರಾಘವ್ ಶರ್ಮಾ ಅವರುಗಳು ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಪಿಯೂ ಕಾಲೇಜಿನ ಪ್ರಾಂಶುಪಾಲರಾದ ಶ್ರೀ. ಶಾಂತರಾಮ್, ಸಂಸ್ಥೆಯ ಕೌನ್ಸಲರ್ ಶ್ರೀಮತಿ. T ಸಿರೀಷಾ ಹಾಗೂ ಪಿಯೂ ಕಾಲೇಜಿನ ಅಧ್ಯಪಕರಾದ ಶ್ರೀಮತಿ. ಗೀತಾ ಶಿಂಧೆ ಅವರುಗಳು ಉಪಸ್ಥಿತರಿದ್ದರು.

BEL ಶಿಕ್ಷಣ ಸಂಸ್ಥೆಯ ಮಾಜಿ ಖಜಾಂಚಿಯಾಗಿದ್ದ ಶ್ರೀಯುತ. ಪ್ರಾಣೇಶಾಚಾರ ಕಡ್ಲಬಾಳ್ ಮತ್ತು BEL ನ ಅಡ್ಮಿಸ್ಟ್ರೇಟರ್ ಶ್ರೀ. ರಘುಪತಿ ಅವರುಗಳ ಸಹಕಾರದಿಂದ ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.