ಜಾಗ್ರತೆ-ಜಾಗೃತಿ – ಒಂದು ವರದಿ
“ನಿಮಗೆ ನಿಮ್ಮ ಹಕ್ಕುಗಳ ಬಗ್ಗೆ ಅರಿವಿದೆಯೇ? ನಿಮ್ಮ ನಡವಳಿಕೆ ಹೇಗಿರಬೇಕು? ನಿಮ್ಮ ಜವಾಬ್ದಾರಿಗಳೇನು?” ಎಂದು ಪ್ರಶ್ನಿಸುತ್ತಾ ಮಕ್ಕಳಿಂದಲೇ ಉತ್ತರವನ್ನು ಹೊರಡಿಸಿ, ಯಾವುದೇ ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿ 1098 ಗೆ ಕರೆಮಾಡಬೇಕೆಂದು, ಮಕ್ಕಳ ಹಕ್ಕು ರಕ್ಷಣಾ ಆಯೋಗದ ಅಧ್ಯಕ್ಷರಾದ ಡಾ.ಕೃಪಾ ಅಮರ್ ಆಳ್ವಾ ಇಂದು ‘ಜನದನಿ’ ಸಂಸ್ಥೆ ಪ್ರೌಢಶಾಲಾ ಮಕ್ಕಳಿಗೆ ಆಯೋಜಿಸಿದ್ದ ಚರ್ಚೆ, ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಯ “ಜಾಗ್ರತೆ-ಜಾಗೃತಿ” ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಹೇಳಿದರು.
ತಮ್ಮ ವೃತ್ತಿ ಜೀವನದ ಅನುಭವವನ್ನು ಹೇಳುತ್ತಲೇ ಗಂಡು, ಹೆಣ್ಣುಮಕ್ಕಳಲ್ಲಿ ಸಮಾನತೆ ಇರಬೇಕು, ಮುಖ್ಯವಾಗಿ ಎಂಥಹ ಸಂದರ್ಭ ಬಂದರೂ ಧೈರ್ಯಗೆಡದೇ ಎದುರಿಸಬೇಕೆಂದು ಹೇಳಿದವರು ನಿವೃತ್ತ ಎಸಿಪಿ ಟೈಗರ್ ಅಶೋಕ್ ಕುಮಾರ್!
ಈ ಕಾರ್ಯಕ್ರಮಕ್ಕೆ ಇನ್ನೋರ್ವ ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಚಲನಚಿತ್ರ ನಿರ್ದೇಶಕರಾದ ಯೋಗರಾಜ್ ಭಟ್ ಮಾತನಾಡಿ, ಮಕ್ಕಳೊಂದಿಗೆ ಈ ದಿನ ನಾನೂ ಮಗುವಾಗಿದ್ದೇನೆ. ಮಕ್ಕಳಲ್ಲಿ ದೇವರಿರುತ್ತಾರೆನ್ನುತ್ತಾರೆ. ಅದು ನಿಜವೆನ್ನುವುದು ಪ್ರತಿಬಾರಿ ನಿಮ್ಮಂಥ ಮಕ್ಕಳಲ್ಲಿ ಬೆರೆಯುವಾಗ ಅನುಭವವಾಗುತ್ತದೆ. ಹದಿಹರೆಯದ ಮಕ್ಕಳಲ್ಲಿ ಎಚ್ಚರಿಕೆ ಮೂಡಿಸುವ ನಿಟ್ಟಿನಲ್ಲಿ ಇಂಥಹ ಕಾರ್ಯಕ್ರಮಗಳು ಇಂದಿನ ಸಮಾಜಕ್ಕೆ ಅಗತ್ಯವಿದೆ ಎಂದು ಮಾತನಾಡುತ್ತಾ ನೆರೆದಿದ್ದ ಮಕ್ಕಳ ಪ್ರಶ್ನೆಗಳಿಗೂ ಕೂಡ ಹಾಸ್ಯಮಯವಾಗಿ ಉತ್ತರಿಸಿದರು.
ಸಮಾಜದಲ್ಲಿ ಇಂದು ಹಾಸುಹೊಕ್ಕಾಗಿರುವ ದೊಡ್ಡ ಪಿಡುಗು ಲೈಂಗಿಕ ಕಿರುಕುಳ, ಅತ್ಯಾಚಾರದ ಬಗ್ಗೆ ಹೈಸ್ಕೂಲ್ ಮಕ್ಕಳಲ್ಲಿರುವಂಥಹ ವಿಚಾರಗಳನ್ನು ತಿಳಿಯಲೋಸ್ಕರ ಬೆಂಗಳೂರಿನ “ಜನದನಿ” ಸಂಸ್ಥೆ ಜಾಗ್ರತೆ-ಜಾಗೃತಿ ಕಾರ್ಯಕ್ರಮವನ್ನು ಇಂದು ಜೂನ್ 17, 2017 ರಂದು, ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿತ್ತು. ಬೆಳಗ್ಗೆ 10 ಕ್ಕೆ ಉದ್ಘಾಟನೆಗೊಂಡು 10.30ರಿಂದ 12.30 ರ ಅವಧಿಯಲ್ಲಿ ವಿವಿಧ ಶಾಲೆಗಳಿಂದ ಆಗಮಿಸಿದ್ದ ಸುಮಾರು 100ಕ್ಕೂ ಮಿಕ್ಕಿ ಮಕ್ಕಳಿಗೆ ಚರ್ಚೆ, ಚಿತ್ರಕಲೆ, ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಗಳ ವಿಷಯಗಳ ಬಗ್ಗೆ ಶಾಲೆಗಳಿಗೆ ಮೊದಲೇ ತಿಳಿದ್ದರಿಂದ ಮಕ್ಕಳು ಪೂರ್ಣತಯಾರಿಯಲ್ಲಿ ಬಂದಿದ್ದರು.
ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ಪಾಟೀಲ್ ಮಾತನಾಡಿ, ಲೈಂಗಿಕ ಕಿರುಕುಳ, ದೌರ್ಜನ್ಯ ಅತ್ಯಾಚಾರ ಕುರಿತಾಗಿ ಇಂದಿನ ಮಕ್ಕಳಲ್ಲಿ ಯಾವ ಮಟ್ಟದ ತಿಳುವಳಿಕೆ ಇದೆ? ಇವುಗಳನ್ನು ಎದುರಿಸಲು ಅವರು ಹೇಗೆ ಸಜ್ಜಾಗಿದ್ದಾರೆ? ನಿರ್ಮೂಲನಗೊಳಿಸಲು ಯಾವ ರೀತಿ ಯೋಚಿಸಬಲ್ಲರು ಎನ್ನುವದನ್ನು ತಿಳಿಯುವುದಕ್ಕಾಗಿಯೇ ಈ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಚಿತ್ರಕಲಾವಿದರಾದ ಮಂಗಳಲಕ್ಷ್ಮಿ, ವಿಜಯಶ್ರೀ ನಟರಾಜ್, ಬರಹಗಾರರಾದ ಚಿದಂಬರ ನರೇಂದ್ರ, ವಿದ್ಯಾರಾವ್ ಹಾಗೂ ರೇಡಿಯೋ ನಿರೂಪಕರಾದ ಛಾಯಾ ಭಗವತಿ, ವಿಜಯಶ್ರೀ ತೀರ್ಪುಗಾರರಾಗಿ ಆಗಮಿಸಿದ್ದರು. ಮಧ್ಯಾಹ್ನ ಭೋಜನದ ನಂತರ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
– ಕುಮುದವಲ್ಲಿ ಅರುಣಮೂರ್ತಿ
ಜನದನಿ ಏರ್ಪಡಿಸಿದ ಸ್ಪರ್ಧೆಗಳ ವಿಜೇತರ ಪಟ್ಟಿ
ಚರ್ಚಾಸ್ಪರ್ಧೆನಿರ್ಣಾಯಕರು:
ವಿಜಯಶ್ರೀ ಎಂ. ಈ ಮತ್ತು ಛಾಯಾ ಭಗವತಿ
ಪ್ರಥಮ:
ಹನುಪ್ರದಾ ಎಂ ೧೦ನೇ ತರಗತಿ – ಸೇಂಟ್ ಮೀರಾ ಪ್ರೌಢಶಾಲೆ
ದ್ವಿತೀಯ:
ಬಿಂದು ಟಿ ಸಿ – ೧೦ನೇ ತರಗತಿ – ಶ್ರೀ ಅಯ್ಯಪ್ಪ ವಿದ್ಯಾಸಂಸ್ಥೆ
ತೃತೀಯ:
ಜಯಂತ್ ಎನ್ ೧೦ನೇ ತರಗತಿ ರ್‍ಯಾನ್ ಇಂಟರ್‌ನ್ಯಾಷನಲ್ ಶಾಲೆ
ಹಾಗೂ ಸತೀಶ ಎ. ೧೦ನೇ ತರಗತಿ – ದೀಪ್ತಿ ವಿದ್ಯಾನಿಕೇತನ ಶಾಲೆ
ಹಾಗೂ ಸತೀಶ ಎ. ೧೦ನೇ ತರಗತಿ – ದೀಪ್ತಿ ವಿದ್ಯಾನಿಕೇತನ ಶಾಲೆ
ಚಿತ್ರಕಲಾ ಸ್ಪರ್ಧೆನಿರ್ಣಾಯಕರು:
ಮಂಗಳಲಕ್ಷ್ಮಿ ಮತ್ತು ವಿಜಯಶ್ರೀ ನಟರಾಜ್
ಪ್ರಥಮ:
ಸನೋಜ್ ಕೆ. ೯ನೇ ತರಗತಿ – ಸೇಂಟ್ ಮೀರಾ ಪ್ರೌಢಶಾಲೆ
ದ್ವಿತೀಯ:
ಹರ್ಷ ಸೋಮಶೇಖರ್ ೯ನೇ ತರಗತಿ – ಭವನ್ ಬೆಂಗಳೂರು ಪ್ರೆಸ್ ಶಾಲೆ
ತೃತೀಯ:
ತ್ರಿವೇಣಿ ಕೆ ಎಲ್ ೧೦ನೇ ತರಗತಿ – ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಮಲ್ಲೇಶ್ವರಂ
ಹಾಗೂ ರಕ್ಷಿತಾ ಎನ್ ೧೦ನೇ ತರಗತಿ – ಸಹಸ್ರದೀಪಿಕಾ ಶಾಲೆ
ಹಾಗೂ ರಕ್ಷಿತಾ ಎನ್ ೧೦ನೇ ತರಗತಿ – ಸಹಸ್ರದೀಪಿಕಾ ಶಾಲೆ
ಪ್ರಬಂಧ ಸ್ಪರ್ಧೆನಿರ್ಣಾಯಕರು:
ಚಿದಂಬರ ನರೇಂದ್ರ ಮತ್ತು ವಿದ್ಯಾ ಸತೀಶ್
ಪ್ರಥಮ:
ಗೌತಮಿ ಜಿ ೯ನೇ ತರಗತಿ ಎಲ್‌ಆರ್‌ಹೆಚ್‌ಎಸ್ ಕೇಂದ್ರೀಯ ಶಾಲೆ
ದ್ವಿತೀಯ:
ವೀಣಾ ಎಂ. ೧೦ನೇ ತರಗತಿ – ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಮಲ್ಲೇಶ್ವರಂ
ತೃತೀಯ:
ಚಿತ್ರಶ್ರೀ ಎಂ. ೯ನೇ ತರಗತಿ – ಸೇಂಟ್ ಮೀರಾ ಪ್ರೌಢಶಾಲೆ
ಹಾಗೂ ನೇತ್ರಾವತಿ ಎಂ. ೧೦ನೇ ತರಗತಿ – ಸೇಂಟ್ ಮೀರಾ ಪ್ರೌಢಶಾಲೆ
ಹಾಗೂ ನೇತ್ರಾವತಿ ಎಂ. ೧೦ನೇ ತರಗತಿ – ಸೇಂಟ್ ಮೀರಾ ಪ್ರೌಢಶಾಲೆ
ಅಗ್ರಣಿಗಳು (ಚಾಂಪಿಯನ್ಸ್)
ಸೇಂಟ್ ಮೀರಾ ಪ್ರೌಢಶಾಲೆ, ಕಾವೇರಿಪುರ, ಕಾಮಾಕ್ಷಿಪಾಳ್ಯ, ಬೆಂಗಳೂರು.